ll ಜೈ ಶ್ರೀ ಗುರುದೇವ್ ll
ಆದಿಚುಂಚನಗಿರಿ ವಿಶ್ವವಿದ್ಯಾಲಯ
ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ
ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಕನ್ನಡ ಬಳಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಭಾಗಿತ್ವದಲ್ಲಿ ಡಿಸೆಂಬರ್ ೩೦, ೨೦೨೪ ರಂದು ಕುವೆಂಪು ಜಯಂತೋತ್ಸವ/ ವಿಶ್ವಮಾನವ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕುವೆಂಪು ಕರ್ನಾಟಕದ ಹೆಮ್ಮೆಯ ಕವಿ ಮಾತ್ರವಲ್ಲ, ಅವರು “ರಾಷ್ಟ್ರಕವಿ”ಯಾಗಿ ಗೌರವಿಸಲ್ಪಟ್ಟಿದ್ದಾರೆ. ಅವರ ಜನ್ಮದಿನವನ್ನು ಆಚರಿಸುವುದು ಅವರ ವ್ಯಕ್ತಿತ್ವ, ಕೃತಿಗಳ ಮಹತ್ವ ಮತ್ತು ಕನ್ನಡ ಭಾಷೆಯ ಮೇಲಿನ ಪ್ರಭಾವವನ್ನು ಸ್ಮರಿಸುವ ಉದ್ದೇಶದಿಂದ. ಅವರ “ರಾಮಾಯಣ ದರ್ಶನಂ” ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆತಿದ್ದು, ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಕಾರಣವಾಯಿತು. ಕುವೆಂಪು ಅವರ ಕೃತಿಗಳು ಮಾನವೀಯತೆಯನ್ನು, ಸಮಾನತೆಯನ್ನು ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತವೆ. “ವಿಶ್ವ ಮಾನವ”ದ ಸಿದ್ಧಾಂತವು ಇಂದಿಗೂ ಪ್ರಸ್ತುತ. ಕುವೆಂಪು ಅವರ ಕೃತಿಗಳು ಕೇವಲ ಸಾಹಿತ್ಯಕ ಆನಂದವನ್ನು ನೀಡುವಷ್ಟೇ ಅಲ್ಲ, ಬುದ್ಧಿಮತ್ತೆ ಮತ್ತು ಸಾಂಸ್ಕೃತಿಕ ಅರಿವನ್ನು ಹೆಚ್ಚಿಸುತ್ತವೆ. ಅವರ ಜೀವನಶೈಲಿ, ಸಾಧನೆಗಳು ಮತ್ತು ತತ್ತ್ವಗಳು, ಚಿಂತನೆಗಳನ್ನು ಜನ್ಮದಿನವನ್ನು ಆಚರಿಸುವ ಮೂಲಕ ಯುವಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಾಂಶುಪಾಲರಾದ ಡಾ. ಎಂ.ಜಿ. ಶಿವರಾಮು ರವರ ಅಧ್ಯಕ್ಷತೆಯಲ್ಲಿ, ಕನ್ನಡ ಬಳಗದ ಕಾರ್ಯಾಧ್ಯಕ್ಷರಾದ ಡಾ. ಮಂಜುಳಾ.ಆರ್, ಸಂಯೋಜಕರಾದ ಡಾ. ವಿನಯ್.ಹೆಚ್. ಆರ್, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕರಾದ ಡಾ. ವಿಜಯ್ ಎಸ್. ಹೂಗಾರ್, ಬಳಗದ ಸಲಹೆಗಾರರಾದ ಡಾ. ಸಾಗರ್. ಬಿ.ಜಿ ಹಾಗೂ ಶ್ರೀ. ಉಮೇಶ್. ಬಿ.ಕೆ ರವರ ಸಮಕ್ಷಮದಲ್ಲಿ ಉದ್ಘಾಟಿತಗೊಂಡ ಈ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ವರ್ಷ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಇದರಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಇತರೆ ಕಾಲೇಜಿನ ವಿದ್ಯಾರ್ಥಿಗಳೂ ಇದ್ದು ಮೆಚ್ಚುಗೆಗೆ ಪಾತ್ರರಾದರು. ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ಇಂತಿದೆ.
*ಕನ್ನಡೇತರರಿಗೆ ಗಾಯನ ಸ್ಪರ್ಧೆ (ಗಾನ ಸುಧೆ)*
ಪ್ರಥಮ ಬಹುಮಾನ – ಆರ್ಯಾನಂದ ಸಿಜು, ಬಿಎಸ್ಸಿ ನರ್ಸಿಂಗ್, ಆದಿಚುಂಚನಗಿರಿ ಶುಶ್ರೂಷಾ ವಿದ್ಯಾಲಯ.
ದ್ವಿತೀಯ ಬಹುಮಾನ – ಚೇತನಾ ದೇರೆ ದೇವಿದಾಸ್, ೨ನೇ ಎಂ.ಬಿ. ಬಿ.ಎಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ.
ತೃತೀಯ ಬಹುಮಾನ – ಎಂ. ಶ್ರೇಯಾ, ೨ನೇ ಎಂ.ಬಿ. ಬಿ.ಎಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ.
*ಗೀಚು ಬರಹ (ಡೂಡಲಿಂಗ್)*
ಪ್ರಥಮ ಬಹುಮಾನ – ಉಜ್ವಲ್. ಎನ್.ವಿ, ಬಿ.ಜಿ.ಎಸ್ ತಾಂತ್ರಿಕ ಮಹಾವಿದ್ಯಾಲಯ
ದ್ವಿತೀಯ ಬಹುಮಾನ – ಪ್ರತೀಕ್ಷಾ, ೪ನೇ ಎಂ.ಬಿ. ಬಿ.ಎಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ.
ತೃತೀಯ ಬಹುಮಾನ – ನಂದನ ನರೇಂದ್ರನ್ ಮತ್ತು ರಕ್ಷಿತಾ.ಕೆ , ೨ನೇ ಎಂ.ಬಿ. ಬಿ.ಎಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ.
*ನುಡಿ ಬರಹ*
ಪ್ರಥಮ ಬಹುಮಾನ – ಮೇಘನಾ, ಆದಿಚುಂಚನಗಿರಿ ಔಷಧ ವಿಜ್ಞಾನ ಮಹಾವಿದ್ಯಾಲಯ.
ದ್ವಿತೀಯ ಬಹುಮಾನ – ಅಕ್ಷತಾ ಅಪ್ಪಸ್ವಾಮಿ, ಆದಿಚುಂಚನಗಿರಿ ಔಷಧ ವಿಜ್ಞಾನ ಮಹಾವಿದ್ಯಾಲಯ.
ತೃತೀಯ ಬಹುಮಾನ – ಕರುಣಶ್ರೀ, ಬಿ.ಜಿ.ಎಸ್ ತಾಂತ್ರಿಕ ಮಹಾವಿದ್ಯಾಲಯ.
*ಚರ್ಚಾ ಸ್ಪರ್ಧೆ*
ಪ್ರಥಮ ಬಹುಮಾನ – ರವಿತೇಜ ಮತ್ತು ಸುಪ್ರೀತ್, ಬಿ.ಜಿ.ಎಸ್. ಶಿಕ್ಷಣ ಕಾಲೇಜು,
ದ್ವಿತೀಯ ಬಹುಮಾನ – ದೀಕ್ಷಾ ಮತ್ತು ಶಶಾಂಕ್, ೪ನೇ ಎಂ.ಬಿ. ಬಿ.ಎಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ.
ತೃತೀಯ ಬಹುಮಾನ – ವರುಣ್ ಕಶ್ಯಪ್ ಮತ್ತು ಶ್ರೀದೀಕ್ಷಾ, ೩ನೇ ಎಂ.ಬಿ. ಬಿ.ಎಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ.
*ರಸಪ್ರಶ್ನೆ ಸ್ಪರ್ಧೆ*
ಪ್ರಥಮ ಬಹುಮಾನ – ಶಿವಪ್ರಸಾದ್, ಕಾರ್ತಿಕ್ ಮತ್ತು ಕಿರಣ್, ಎಂ.ಬಿ. ಬಿ.ಎಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ.
ದ್ವಿತೀಯ ಬಹುಮಾನ – ಸುಷ್ಮಾ, ಸೌಜನ್ಯ ಮತ್ತು ಸೌಮ್ಯ, ಎಂ.ಬಿ. ಬಿ.ಎಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ.
ತೃತೀಯ ಬಹುಮಾನ – ಸಾನಿಕ, ಪೂಜಾ ಮತ್ತು ಕುಸುಮ, ಎಂ.ಬಿ. ಬಿ.ಎಸ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ.
ಉದ್ಘಾಟನಾ ಭಾಷಣ ಮಾಡಿದ ಎಂ. ಜಿ. ಶಿವರಾಮು ರವರು ಸಾಹಿತ್ಯಕ್ಕೆ ಕುವೆಂಪುರವರ ಕೊಡುಗೆ ಮತ್ತು ಕನ್ನಡ ಪ್ರೇಮವನ್ನು ಪ್ರಸ್ತಾಪಿಸುತ್ತಾ ಇಂದಿನ ಪೀಳಿಗೆಯವರು ಈ ಭಾಷಾಭಿಮಾನ ಮುಂದುವರೆಸಲು ಕರೆ ಕೊಟ್ಟರು. ಕುವೆಂಪುರವರ ಜೊತೆ ತಮ್ಮ ವೈಯುಕ್ತಿಕ ಅನುಭವವನ್ನು ಹೆಮ್ಮೆಯಿಂದ ಹಂಚಿಕೊಂಡ ಡಾ. ಸಾಗರ್ ಅವರು ಕುವೆಂಪುರವರನ್ನು ನೊಬೆಲ್ ಪಾರಿತೋಷಕಕ್ಕೆ ಅರ್ಹರಾಗಿದ್ದ ಮೇರು ಕವಿಯೆಂದು ಕೊಂಡಾಡಿದರು. ಕಾರ್ಯಕ್ರಮ ನಿರೂಪಣೆ ಡಾ. ತೇಜಸ್ವಿನಿ ಮತ್ತು ಕು. ವರ್ಷ ಮಾಡಿದರೆ, ಪ್ರಾರ್ಥನಾ ಗೀತೆಯನ್ನು ಕು. ಕೃಷ್ಣಪ್ರಿಯ ಹಾಡಿದರು. ಕುವೆಂಪು ರವರ ರಚನೆಯ ನಾಡಗೀತೆಯಿಂದ ಆರಂಭವಾದ ನಂತರ ಕು. ಸಂಜನಾ ರವರು ಭರತನಾಟ್ಯದ ಮೂಲಕ ಮನ ಸೆಳೆದರು. ಕುವೆಂಪು ವಿರಚಿತ ಕವನ ವಾಚನ ಮಾಡಿದ ಕು. ವರ್ಷ ಮತ್ತು ಭಾವಗೀತೆ ಹಾಡಿದ ಕು. ಉತ್ಪಲ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರು ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಸಂಕ್ಷಿಪ್ತ ಮಾಹಿತಿ ಪತ್ರ ಬಿಡುಗಡೆ ಮಾಡಿದರು. ಕನ್ನಡ ಬಳಗದ ವತಿಯಿಂದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯಕ್ಕೆ ಕುವೆಂಪು ಮತ್ತು ವಿವಿಧ ಸಾಹಿತಿಗಳ ೫೦ಕ್ಕೂ ಹೆಚ್ಚು ಕನ್ನಡ ಪುಸ್ತಕಗಳ ಕೊಡುಗೆ ನೀಡಲಾಯಿತು.