ll ಜೈ ಶ್ರೀ ಗುರುದೇವ್ ll
ಆದಿಚುಂಚನಗಿರಿ ವಿಶ್ವವಿದ್ಯಾಲಯ
ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ
ದಿನಾಂಕ 29/12/2023 ರಂದು ಏಮ್ಸ್ ಕನ್ನಡ ಬಳಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್. ಎಸ್. ಎಸ್) ಘಟಕಗಳ ಸಂಯುಕ್ತಾಶ್ರಯದಲ್ಲಿ ಕನ್ನಡದ ರಸಕವಿ, ಋಷಿ ಕವಿ, ಜಗಕೆಲ್ಲ ವಿಶ್ವ ಮಾನವ ಸಂದೇಶ ಸಾರಿದ ಮೇರು ಕವಿ ಕುವೆಂಪು ರವರ ಸಂಸ್ಮರಣಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ ಜಿ ಶಿವರಾಮುರವರು ಕನ್ನಡ ಸಾಹಿತ್ಯಕ್ಕೆ ಕುವೆಂಪುರವರ ಕೊಡುಗೆಯನ್ನು ನೆನೆಸಿಕೊಳ್ಳುತ್ತಾ ಅವರ ಕುರಿತ ಜೀವನ ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು.
ಏಮ್ಸ್ ಕನ್ನಡ ಬಳಗದ ವತಿಯಿಂದ ಮಹಾವಿದ್ಯಾಲಯದ ಗ್ರಂಥಾಲಯಕ್ಕೆ ಕುವೆಂಪು ವಿರಚಿತ ವಿವಿಧ ಪುಸ್ತಕಗಳನ್ನು ನೀಡಲಾಯಿತು.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಕುವೆಂಪು ಜೀವನಾಧಾರಿತ ರಸಪ್ರಶ್ನೆ ಕಾರ್ಯಕ್ರಮ ಆನ್ ಲೈನ್ ರೂಪದಲ್ಲಿ ಏರ್ಪಡಿಸಲಾಗಿತ್ತು. ಏಮ್ಸ್ ಕನ್ನಡ ಬಳಗ ಕಾರ್ಯದರ್ಶಿಯಾದ ಡಾ.ವಿನಯ್ ಹೆಚ್.ಆರ್, ಏಮ್ಸ್ ಎನ್ ಎಸ್ ಎಸ್ ಘಟಕದ ಮುಖ್ಯಸ್ಥರಾದ ಡಾ. ವಿಜಯ ಹೂಗಾರ್ ರವರು, ಡಾ. ಚೇತನ್ ಆನಂದ್ ರವರು, ಮುಖ್ಯ ಗ್ರಂಥಪಾಲಕರಾದ ಡಾ. ವಸಂತ್ ಕುಮಾರ್ ಹಾಗೂ ಇತರೆ ಪದಾಧಿಕಾರಿಗಳು ಹಾಜರಿದ್ದರು.